ನನ್ನ ದಾರಿ ನನಗೆ ಎಂದು ಗಡಿಯ ತೊಡೆದು ಹೊರಟೆನು
ಕಿರಿದಾರಿಯ ಕ್ರಮಿಸಿ ಹೆದ್ದಾರಿಯನ್ನು ತುಳಿದೆನು
ಒಬ್ಬಂಟಿಯು ನಾನು ಎಂಬ ಕಟು ಸತ್ಯವ ಮರೆಯಲು
'ಸ್ಪಷ್ಟ ಗುರಿಯ ಪಥಿಕಗೆಂದೂ ಪಥವೇ ಸಾಥಿ' ಎಂದೆನು
ದಾರಿಯಲ್ಲಿ ಸಾಗುತಿದ್ದ ಮಂದಿಯನ್ನು ನೋಡುತ
ಹಿಂದಿಕ್ಕುವ ತವಕದಲ್ಲಿ ಗುರಿಯ ಕಳೆದುಕೊಂಡೆನು
ಕ್ರಮಿಸಿ ಬಂದ ದಾರಿ ನೋಡಿ 'ನನ್ನದಲ್ಲ'ವೆನಿಸಲು
ಸದಾ ಮೌನಿ ನನ್ನ ಮನಸು ಮಾತನಾಡತೊಡಗಿತು :-
"ಗುರಿಯು ಒಂದು ದಿಗಂತವು; ಪಥವದತಿ ಅನಂತವು
ದಾರಿಗುಂಟ ಗುರುವಿದ್ದರೆ ಗುರಿಯು ಬರಿ ನಿತಾಂತವು
ಪಥಿಕ ಮಂದಿ ಗೆಳೆತನವದು ಬಹು ಶಕ್ತಿಯ
ಕೊಡುವುದು
ಕ್ರಮಿಸಿದಂತೆ ಕಠಿಣ ದಾರಿ ತಲ್ಪ-ಲತೆಗಳೆನಿಪವು"
-ಇದನೆ ನಂಬಿ ಸಾಗುತಿಹೆನು ಇಂದೂ ನಾನು ಗೆಳೆಯರೇ!
ಆತ್ಮಸ್ಥೈರ್ಯ, ಸ್ವಂತ ದೃಷ್ಟಿ, ಸದ್ಭಾವದಿಂದ. ಜೊತೆಗೆ,
ನಡಿಗೆ ವೇಗ ವರ್ಧಿಸುತ್ತ ಬಲು ದೂರವ ಕ್ರಮಿಸುವೆ
ಹೆಜ್ಜೆ ಗುರುತು ಅಳಿಯೋ ಮೊದಲು ಹೊಸಹೆಜ್ಜೆಯನಿಕ್ಕುವೆ
Thursday, July 16, 2009
Subscribe to:
Posts (Atom)
ಬಿಲ್ಡ್ ಫೇಲ್ಯೂರ್ -(Build Failure): ಒಂದು ಜೆಂಕಿನ್ಸ್ ಕವಿತೆ
[Inspired by a poem of my hostel senior, Vinayak K] Shatpadi: Bhaminee - see the rules here ಒಂದು ಬೋರಿಂಗ್ ಶುಕ್ರವಾರದಿ ಮುಂದೆ ಬರಲಿಹ ಸಾಲು ರಜ...
-
ನಾನು ಎರಡನೇ ಕ್ಲಾಸಿನಲ್ಲಿರುವಾಗ ನಡೆದ ಘಟನೆ. ನಾನಾಗ ನಮ್ಮ ಕ್ಲಾಸಿನ 'ಮಿನಿ ರೌಡಿ' ಎಂದು ಗುರುತಿಸಿಕೊಂಡಿದ್ದೆ. ಜನರನ್ನು ರೇಗಿಸೋದಂದರೆ ಏನೋ ಒಂದು ಖುಷಿ ಆಗ...
-
ನಾನಾವಾಗ ಎರಡನೇ ಕ್ಲಾಸು. ಮನೆಯಿಂದ ಒಂದೂವರೆ ಕಿಲೋಮೀಟರ್ ದೂರದಲ್ಲಿ ಪ್ರೈಮರಿ ಶಾಲೆ. ನನ್ನ ಅಮ್ಮ ಅಲ್ಲಿ ಹೆಡ್ ಮಾಸ್ಟರ್. ಅಪ್ಪ ಸಾಲ ಮಾಡಿ ಕೃಷಿ ಆಸ್ತಿ ಮಾಡಿದ್ದರು. ಮೇ...
-
ಬೆಳಗ್ಗೆ ಒಂಭತ್ತೂವರೆಗೆ ಮೀಟಿಂಗು. ರಾತ್ರಿ ಒಂಭತ್ತೂವರೆಗೂ. ಮಧ್ಯಾಹ್ನ ರಾತ್ರಿ ಊಟಕ್ಕೆ ಬ್ರೇಕು. ಟೀ ಕಾಫಿ home-officeಗೇ ಸಪ್ಪ್ಲೈ ಅಮ್ಮನಿಂದ. "ನಾಳೆಯಿಂದ...