ಬೆಳಗ್ಗೆ ಒಂಭತ್ತೂವರೆಗೆ ಮೀಟಿಂಗು. ರಾತ್ರಿ ಒಂಭತ್ತೂವರೆಗೂ.
ಮಧ್ಯಾಹ್ನ ರಾತ್ರಿ ಊಟಕ್ಕೆ ಬ್ರೇಕು. ಟೀ ಕಾಫಿ home-officeಗೇ ಸಪ್ಪ್ಲೈ ಅಮ್ಮನಿಂದ.
"ನಾಳೆಯಿಂದ ಬೇಗ ಲಾಗ್ಔಟ್ ಮಾಡ್ಬೇಕು. ಸಂಜೆ ಒಂದು ವಾಕ್ ಮಾಡ್ಬೇಕು" -ನನ್ನ ಸ್ವಗತ
ಸರಿ, ಮಲಗುವ ಈಗ.
ಅರೆ! ಪುಟ್ಟ ಮಗಳು ಎಲ್ಲಿ? ಹಳೇ ಹೆಡ್ ಫೋನ್ ಹಾಕ್ಕೊಂಡು ಮೀಟಿಂಗ್ ಆಟ ಅಂತೆ!
"ಮೀಟಿಂಗ್ ಮುಗಿಸಿಯೇ ಚಾಚಿ ಮಾಡೋದು" - ಮಗಳ ಹಠ; ನಿದ್ದೆ ಕಣ್ಣಿನಲ್ಲಿ
ಸ್ವಲ್ಪ ಸಾಕಾಯ್ತು; ಅವಳ ಹಠ ಬಿಡಿಸಿ ಮಲಗಿಸಿ, ನಾನೂ ನಿದ್ರಾ ಪರವಶನಾಗಲು
*******
ಇವತ್ತು ಕೆಲಸ ಸ್ವಲ್ಪ ಕಮ್ಮಿ ಇದೆ. ಒಂದು blocker issueಗೆ ಫಿಕ್ಸ್ ಬರುವ ತನಕ ಏನೂ ಮಾಡಕ್ಕಾಗಲ್ಲ. ಹೇಳ್ತಾ ಇದ್ದೆ breakfast ಹೊತ್ತಲ್ಲಿ.
"ಬ್ಯಾಂಕ್ ಗೆ ಹೋಗಿ ಸ್ವಲ್ಪ ಕ್ಯಾಷ್ ತೊಗೊಂಡು ಬಾ; ಖರ್ಚಿಗೆ ಬೇಕು. ಹಾಗೆಯೇ ನ್ಯೂಸ್ ಪೇಪರೂ ಕೂಡ " - ಅಮ್ಮನ ಆರ್ಡರ್.
ಹೊರಟೆ. ಅಂಗಡಿಯಲ್ಲಿ ಹಲವಾರು ಜನ. ಎಲ್ಲಾ ಪರಿಚಯದವರೇ ಇಲ್ಲಿ ಹಳ್ಳಿಯಲ್ಲಿ.
ದಾದ ಬಟ್ರೆ, ಬೇಲೆ ಇಜ್ಜಾ?
ಬೇಲೆದ ನಡುಟು ಇಂಚಿ ಬರ್ರಗ್ ಅಪುಂಡಾ?
ಕೋವಿಡ್ ಬತ್ತುಂಡಲ ಈರೆಗ್ ಸಂಬಲ ಬರ್ಪು೦ಡತ್ತಾ!
ನನ ಮೂಲೆನ ?
"Blocker issue is fixed; can you confirm if it works now?" ವಾಟ್ಸಾಪ್ ನಲ್ಲಿ ಮೆಸ್ಸೇಜ್ ಬಂತು. ಕಿಕ್ ಸ್ಟಾರ್ಟ್ ಮಾಡಿ ವಾಪಸ್ ಮನೆಗೆ ಬಂದೆ.
"ಅಂಗಡಿಯಲ್ಲಿ ತುಂಬಾ ರಶ್ಶ್ ಇತ್ತಾ? ಅಥವಾ ಬ್ಯಾಂಕ್ ಸರ್ವರ್ ಡೌನಾ?" ಅಮ್ಮನ ಪ್ರಶ್ನೆ.
ಸಂಜೆ ಆಯಿತು, ಅರೆ! ಸಂಜೆ ಅಲ್ಲ, ರಾತ್ರಿ ಹತ್ತು! ಯಾರಿಗ್ಗೊತ್ತು! ನಾಳೆಯಾದರೂ ವಾಕ್ ಮಾಡಬೇಕು.
******
ವಾಪಾಸ್ ಬರ್ತೀರಾ? -ಅಂತ ಆಫೀಸ್ನಲ್ಲಿ ಸರ್ವೇ ಶುರು ಆಗಿದೆ.
ತ್ರಿಶಂಕು ಸ್ಥಿತಿ. ಏನು ಹೇಳಲಿ! "ಒಮ್ಮೊಮ್ಮೆ ಬರುವೆ" ಅಂತ ಅಂದೆ.
'ಆಫೀಸಿಗೆ ಹೋದರೆ ಸ್ವಲ್ಪ ಹೊಟ್ಟೆ ಕರಗಬಹುದು, ಕೂತು ತಿಂದು ಸಜ್ಜಾಗಿದ್ದೇನೆ' ಬೊಜ್ಜು ತುಂಬಿದ ಗೆಳೆಯನೂ ಅಂದ.
ಟೀವಿ ಆನ್ ಮಾಡಿದೆ.
ಪರ್ಮನೆಂಟ್ ಮನೆಯಿಂದಲೇ ಕೆಲಸ ಅಂದ ಕಂಪೆನಿಗಳೆಲ್ಲ ವಾಪಾಸ್ ಕರೀತಾ ಇವೆ.
ವರ್ಕ್ ಫ್ರಮ್ ಹೋಮ್ - ಯಾರಿಗೆ ಲಾಭ ಯಾರಿಗೆ ನಷ್ಟ?
ನ್ಯೂಸ್ ಚಾನೆಲ್ ಅನಾಲಿಸ್ ನಡೀತಾ ಇತ್ತು. ಇವರಿಗಂತೂ ಲಾಭ ಅಂದ್ಕೊಂಡೆ.
ಇರಲಿ. ಸಾಕಾಗಿದೆ. ಒಮ್ಮೆ ಆಫೀಸ್ ಹೋಗಬೇಕು.
****
Covid pandemic gave most of the software engineers an opportubity to stay together with the family (of all the various categories, IT job has/had longest WFH in this situation). A person like me would have never imagined staying inside the house- 14 years after staying away from parents.
Write up is purely for fun. Stay safe.