ಅದು ಟೀವಿಯ ಪಕ್ಕದ ಮೂಲೆಯಲಿ ಮುದುಡಿದೆ.
ಅದರ ಪಕ್ಕದಲಿ ಮಿಣುಕುತ್ತಿರುವ ವೈಫೈ ರೌಟರ್ ನಲ್ಲಿ
ಜೀವನೋತ್ಸಾಹ ಹೊಳೆಯುತ್ತಿದೆ.
ನನಗದು ಬಹಳಷ್ಟು ಅಂಟಿಕೊಂಡು ಬಿಟ್ಟಿದೆ-
ಮುಖ್ಯವಾಗಿ, ನನ್ನ ಗಣಕ ಯಂತ್ರಕ್ಕೆ.
ಅದರಿಂದ ಪ್ರೇರಿತಗೊಂಡಿದ್ದೇನೆ; ಅದನ್ನು ನಂಬಿದ್ದೇನೆ
ನಂಬಿ ಕೆಲಸ ಮಾಡುತ್ತಿದ್ದೇನೆ- ಮನೆಯಿಂದ.
ಪಕ್ಕದ ಹೂದಾನಿಯಲ್ಲಿ ಸಿಲುಕಿರುವ
ಆ ಹೂವಲ್ಲಿ ಕಂಪಿಲ್ಲ.
No comments:
Post a Comment