[Inspired by a poem of my hostel senior, Vinayak K]
Shatpadi: Bhaminee - see the rules here
ಒಂದು ಬೋರಿಂಗ್ ಶುಕ್ರವಾರದಿ
ಮುಂದೆ ಬರಲಿಹ ಸಾಲು ರಜೆಗಳ
ಮುಂದುಗಾಣುತ ನಾನು ಫೇಸ್ಬುಕ್ ತೆರೆದು ಕುಳಿತಿರಲು ।
ಬಂದಿತದು ಜೆಂಕಿನ್ಸು ಮೈಲೂ
ಅಂದಿತದು ನಿಮ್ ಬಿಲ್ಡು ಫೇಯ್ಲೂ
ಚೆಂದದಿಂದಲಿ ತೋರಿಸಿತು ನನ್ನೋನು ಕಮಿಟೈಡೀ (my own commit ID )।।
ಬಾಸು ನೋಟಿಫಿಕೇಶನೋಡುತ
ಘಾಸಿಗೊಂಡೊಟ್ರಾಸಿಯಾಡುತ
ತಾಸಿಗೆರಡಪ್ಡೇಟು ಕೇಳುತ ರೋಸಿ ಹೋಗಿರಲು ।
ಕ್ಲೋಸು ಗೆಳೆಯರು ಕಾಫಿಗೋಡಲು
ತಾಸುಗಟ್ಟಲೆ ಎನ್ನ ಮುಗಿಯಲು
ಕಾಸು (cause) ಸಿಗದಿರೆ ಮೊರೆಯ ಹೋದೆನು ಟೀಮ್ಸ್ ಮೀಟಿಂಗು ।।
ನಾನು ಶೇರಿಂಗ್ ಆನು ಮಾಡೀ
ಮೇನು ಅಭಿಯಂತರನ (scrum master) ಜೋಡೀ
ಕ್ಲೀನು ಕೋಡು ಚೆಕೌಟು ಮಾಡಲು ನುಡಿಯಲಾ ಹಿರಿಯ ।
ಫೈನು, ಇಂಡೆಂಟೇಷನೆಲ್ಲಿ?
ಲೈನು ಹತ್ತರ ಎಂಡು ಎಲ್ಲಿ?
ಟ್ರೈನು ತರಹದಿ ಬಂದವಿನ್ನೂರೈದು ಕಾಮೆಂಟ್ಸು।।
ನನ್ನ ವೀಕೆಂಡ್ ಪ್ಲಾನು ಮುಗಿಯಲು
ಅನ್ನ ಬ್ರಹ್ಮನ ನೆನಪು ಮರೆಯಲು
ಎನ್ನ ಶನಿ-ರವಿವಾರದಂತ್ಯವು ಗ್ರಹಣದಲಿ (Eclipse, editor) ಕೊನೆಯು।
ಮಣ್ಣು ಹೊರಲೇ ನಾನು ಲೇಸು
ಕನ್ನ ಹೊಡೆದಿಹ ಕೋಡು ವೇಸ್ಟು
ಎನ್ನುತಲಿ ಗಿಟ್ ಗುರುವಿಗಂದೆನು ಗಿಟ್ಟು-ರೀವರ್ಟೂ (git revert )।।
ಕೆಂಪು ಬಣ್ಣದ ಬಿಲ್ಡು ಕಂಡರೆ
ತಂಪು ಏಸಿಯು ಭಾರಿ ತೊಂದರೆ
ಕಂಪಿಸುವುದೆನ ಮನವು ಮಾಸ್ಟರ್ ಬ್ರಾಂಚನೂ ನೆನೆದೂ ।
ಗುಂಪು-ಗುಂಪಲಿ ರಜೆಯು ಕಂಡರೆ
ಮಂಪರಲಿ ಕೋಡ್ ಬರೆಯಬೇಡಿರಿ
ಸಿಂಪಲೀ ರೂಲ್ - ಶುಕ್ರವಾರದಿ ವರ್ಜ್ಯ ಗಿಟ್ ಪುಶ್ಶು!!! ।।