Tuesday, November 24, 2009

ಇಂಚರ

ಪಕ್ಷಿಗಳ ಇಂಚರದಿ ಆಹ್ಲಾದಗೊಂಡು ರವಿ
ರಭಸದಿಂದೇರುವನು ಪೂರ್ವ ನಭದಿಂದ |
ಚರಾಚರ ಜೀವ ಕುಲ ಹುರುಪಿನಿಂ ಬೆಳಗುವುದು
ಇಂಚರದ ಚಲನೆಯಿರೆ ಜಗವೆಲ್ಲ ಅಂದ ||

ನೂಪುರದ ನರ್ತನವು ರಸಿಕತೆಯ ತುಂಬುವುದು
ಅಪ್ಸರೆಯ ನೆನಹಿನಲಿ ಕಾಣುವುದು ನಾಕ |
ಸಪ್ತಸ್ವರ ಹೊರಡಿಸುವ ಶಾರದೆಯ ವೀಣೆಯಿಂ
ಸಾರ್ಥಕ್ಯ ಭಾವ ಹೊಂದುವ ಮನುಜ ಲೋಕ ||

ಪಾಂಚಜನ್ಯದ ನಾದ ಠೇಂಕಾರದಿಂ ಅಂದು
ಸದ್ಧರ್ಮ ಜಯಿಸಿತ್ತು; ತೊಲಗಿ ಭೂಭಾರ |
ವಿಹಗಗಳ ಇಂಚರವು ಸುಶ್ರಾವ್ಯವೆನಿಸುವುದು
'ಶ್ರವ'ವನೂ ಬೀಳಿಪುದು ಅನಿವಾರ್ಯವಾಗೆ! ||

ಆಸಕ್ತ ಕಿವಿಯಿರಲು ಚಿಲಿಪಿಲಿಯೂ ಚೆಂದ!
ಕಾಳೊಂದ ಕಂಡ ಬಲು ಖಗಗಳುನ್ಮಾದ |
ಕಲರವವು ಮೂಡುವುದು ಕೂಡಿ ನಡೆದಾಗ
ಇಂಚಿಂಚು ಜೀವನದಿ ಕಾಣುವೆವು ಮೋದ ||

6 comments:

ಬಿಲ್ಡ್ ಫೇಲ್ಯೂರ್ -(Build Failure): ಒಂದು ಜೆಂಕಿನ್ಸ್ ಕವಿತೆ

[Inspired by a poem of my hostel senior, Vinayak K] Shatpadi: Bhaminee - see the rules here     ಒಂದು ಬೋರಿಂಗ್ ಶುಕ್ರವಾರದಿ  ಮುಂದೆ ಬರಲಿಹ ಸಾಲು ರಜ...