Thursday, February 11, 2010

ಹಾಯ್! ಮೈಸೂರು !!!

ಭಾಗ- ೧

ಮೈಸೂರು ನಗರದಲಿ ಮೊದಲ ಹೆಜ್ಜೆಯನಿಟ್ಟು
ಇನ್ನೇನು ಎರಡನೆಯ ಪಾದವನ್ನೂರಬೇಕೆಂದು
ನಾನೆಣಿಸುತ್ತಲಿರುವಾಗ ಧುತ್ತೆಂದು ಬಂದನಾ ಅಟೋ ಡ್ರೈವರು |
ಸಾರ್, ನಿಮಗೆಲ್ರಿ ಹೋಗಬೇಕೆಂದಾತ ಕೇಳಲೂ
ಮುದದಿ ರಿಕ್ಷವನೇರಿ SJCಗೆನ್ನುತಲಿ
ನಗರ ಸೌಂದರ್ಯ ವೀಕ್ಷಿಸುತ್ತಿರುವಾಗಲೇ ಕಾಲೇಜು ಕಂಡಿತು ||


ಅಡ್ಮಿಶನ್ ಮುಗಿದು ನಿಲ್ದಾಣಕ್ಕೆ ಬರುತಿರಲು
ದಾರಿಬದಿ ಕಂಡ ನೂರಾರು ಹೂದೋಟಗಳು!
ನೂರಾರು ಹೊಂಡವಿಹ ನಮ್ಮ ಹಳ್ಳೀ ರಸ್ತೆ ಕಣ್ಣೆದುರು ಕುಣಿಯಿತು |
ಒಟ್ಟಿನಲಿ ಮೈಸೂರು ಮುದವನ್ನು ನೀಡಲಿದೆ
ಸಾಂಸೃತಿಕ ನಗರಿಯಿದು ಮನವನ್ನು ತಣಿಸಲಿದೆ
ಅತ್ಯುಚ್ಚ ಸಾಧನೆಯ ಜೀವಿತಡಿ ಮಾಡಲೆನ್ನನು ಇಲ್ಲಿಗಾಹ್ವಾನಿಸಿಹುದು ||


ಭಾಗ- ೨


ಹಾಸ್ಟೆಲ್ಲಿ ಕೂರುತಲಿ ಮನೆಯ ನೆನಪಾಗುತಿದೆ
ನಮ್ಮ ಹಳ್ಳಿಯ ಅಂದ ಕಣ್ಣೆದುರು ಕುಣಿಯುತಿದೆ
ಸತ್ಯಸ್ಯ ಸತ್ಯವೀ ಮಾತು- "ಜನನೀ ಜನ್ಮ ಭೂಮೀ ಶ್ರೇಷ್ಟವು |
ತರಗತಿಯ ಮೂಲೆಯಲು ಮನೆಯನ್ನು ಹುಡುಕುತಿಹೆ
ನಮ್ಮೂರ-ಮೈಸೂರ ತುಲನೆಯನು ಮಾಡುತಿಹೆ
ಛೆ! ಬೇಗನೇ ಕಳೆಯಲೀ ನಾಲ್ಕು ವರುಷಗಳೆಂಬ ಪ್ರಾರ್ಥನೆಯ ಜೊತೆಗೆ! ||

ಒದಲೋಸುಗ ಪುಸ್ತಕಗಳನ್ನು ಹಿಡಿದರೂ
ಮನೆಮಂದಿಯಾ ಚಿತ್ರಪಟಗಳೇ ಮೂಡುತಿವೆ!
ಹೀಗಾದ್ರೆ exams ನಾ ಪಾಸಾಗೋದು ಹೇಗೆ ಸಾಧ್ಯವೋ ಶಿವನೇ...? |
ನಮ್ಮೂರ ತುಳುವಿಲ್ಲ; ಕನ್ನಡವೂ ಹಾಗಲ್ಲ
ಸಂಪೂರ್ಣ ಡಿಫರೆಂಟು ಮೈಸೂರು ನಗರವಿದು
ಸಂಪೂರ್ಣ ಬೆಳೆದ ಮರವನ್ನು ಕಿತ್ತಿಟ್ಟಂತೆ ನನ್ನದೀ ಪಾಡು! ||

ಸತತ ಮೂರ್-ದಿನಕಿಂತ ಹೆಚ್ಚು ರಜೆಗಳ ಸಾಲು
ಯಾವಾಗ ಬರುವುದೋ ತರುವುದೋ ಸಂತಸವ
ಎಂಬ ಕನಸಲ್ಲೆ ನನ್ನೂರ ಕಾಣುತ್ತ ಕ್ಯಾಲೆಂಡರ್ ನೋಡುತಿರುವೆ! |




ಭಾಗ- 3

ಹಾಯ್! ಎಷ್ಟೊಂದು ಬೇಗನೇ ಕಳೆದು ಹೋಯಿತೀ
ನಾಲ್ಕು ವರುಷಗಳೆಂಬ ಅಪರಂಜಿ ಘಳಿಗೆಗಳು
ಈ ಮಧ್ಯೆ ನಾ ದಾಟಿರುವ ದಶಕೋಟಿ ಕ್ಷಣ ಕಣಗಳು |
ನಮ್ಮೂರು-ಮೈಸೂರು ಬೇರೆ ಏನೂ ಅಲ್ಲ
adjust ಆಗಲು ಮಾತ್ರ ಸಮಯವದು ಹಿಡಿಯುವುದು!
ಹಾಸ್ಟೆಲ್ಲು ಕಾಲೇಜು ನನ್ನ ಮನೆಯಾಗಿಹುದು ಉತ್ಪ್ರೇಕ್ಷೆಯಲ್ಲವೋ ||

ಪೂರ್ವಜನ್ಮದಲಿ ನಾನು ಮಾಡಿದ್ದ ಪುಣ್ಯವು
ಸ್ನೇಹಿತರ ರೂಪದಲಿ ನನ್ನೆದುರು ನಲಿಯುತಿದೆ
ಮುಂಬರುವ ಜನ್ಮದಳು ಇವರನ್ನೇ ಕರುಣಿಸೋ ಓ ನನ್ನ ಪ್ರಭುವೇ... |
ಸಾಸ್ಕೃತಿಕ ನಗರಿಯಿದು-ಸ್ವಚ್ಚಂದ ನಗರಿಯಿದು
ನೂರಾರು ಪಾಠಗಳ ಜೀವನದಿ ಕಲಿಸಿಹುದು
ದೇವ ವರವನು ಕೊಟ್ರೆ ದೇವಲೋಕವ ಬಿಟ್ಟು ಮೈಸೂರ ಆಯ್ದುಕೊಳುವೆ!!! ||

_____________________________________________________

[ಮೈಸೂರಿಗೆ ಕಾಲಿಟ್ಟ ಹೊಸತರಲ್ಲಿ ಬರೆದಿದ್ದ ಕವನವಿದು]

5 comments:

ಬಿಲ್ಡ್ ಫೇಲ್ಯೂರ್ -(Build Failure): ಒಂದು ಜೆಂಕಿನ್ಸ್ ಕವಿತೆ

[Inspired by a poem of my hostel senior, Vinayak K] Shatpadi: Bhaminee - see the rules here     ಒಂದು ಬೋರಿಂಗ್ ಶುಕ್ರವಾರದಿ  ಮುಂದೆ ಬರಲಿಹ ಸಾಲು ರಜ...