Friday, November 19, 2010

ನಾಗರಿಕರ ಮೇಲೆ ಜಾಗತೀಕರಣದ ಪ್ರಭಾವ


ಇಪ್ಪತ್ತೊಂದನೇ ಶತಮಾನದ "ಆಧುನಿಕ" ಜನರ ಜೀವನ ಶೈಲಿಯನ್ನೊಮ್ಮೆ ನೋಡೋಣ: ದೂರದ ಸ್ವಿಜರ್ಲಾಂಡಿನಲ್ಲಿ ತಯಾರಾದ ಅಲರಾಂ ಗಡಿಯಾರವನ್ನು ಒಂದೆರಡು ಬಾರಿ snooze ಮಾಡಿ ಹೇಗೋ ಎದ್ದರೆ, ಮುಂದಿನ ಕೆಲಸಗಳೇನೆಂದು ಬೇರೆ ಹೇಳಬೇಕಿಲ್ಲ. ಮಗದೊಂದು ಪರದೇಶದಲ್ಲಿ ತಯಾರಾದ toothpaste ninದ ನೊರೆ ಬರಿಸಿಕೊಂಡರೆ ಮುಂದೆ ಒಂದರಮೇಲೊಂದರಂತಾಗಿ, ರಾತ್ರಿ ಹೊತ್ತು ಉರಿಸುವ ಸೊಳ್ಳೆ "coil"ಗಳ ತನಕ 'ಆಮದು' ವಸ್ತುಗಳ ಬಳಕೆ ನಡೆಯುತ್ತಲೇ ಇರುತ್ತದೆ. ಅದೇ ನಮ್ಮ ತಾತ, ಮುತ್ತಾತರ ಜೀವನ ಶೈಲಿಯನ್ನೊಮ್ಮೆ ನೋಡಿ: ಬ್ರಾಹ್ಮೀ ಮುಹೂರ್ತದಲ್ಲೇ ಎದ್ದು 'ಗಂಗೇಚ ಯಮುನೇ ಚೈವ' ಎನ್ನಲಾರಂಭಿಸಿದರೆ ಅಜ್ಜಿಯಂತೂ, ಕೋಳಿ ಕೂಗುವ ವೇಳೆಗಾಗಲೇ ಮನೆ ಕೆಲಸವನ್ನು ಶುರು ಮಾಡಿ ಬಿಡುತ್ತಿದ್ದಳು. ರಾತ್ರಿ ಮೊಮ್ಮಕ್ಕಳಿಗೆ ಜೋಗುಳ ಹಾಡಿ "ಗೋವಿಂದಾ-ಪರಮಾತ್ಮಾ" ಎಂದರೇನೇ ರಾತ್ರಿಯಾಯಿತು ಎಂದರ್ಥ!
ಈ ಎರಡು ವಿಷಯಗಳ ತುಲನಾತ್ಮಕ ವಿಮರ್ಶೆಯನ್ನೀಗ ಮಾಡೋಣ. ಈ ಅಜಗಜಾಂತರಕ್ಕೆ ಕಾರಣವೇ "ಜಾಗತೀಕರಣ!"
ಗ್ಯಾಟ್ ಒಪ್ಪಂದಕ್ಕೆ ಭಾರತ ಸಹಿ ಹಾಕಿದ ನಂತರ ಆಗಿನ ಅರ್ಥ ಮಂತ್ರಿ ಮನಮೋಹನ್ ಸಿಂಗ್ ಹೇಳಿದ ಮಾತನ್ನು ಕೇಳಿ:"ಜಾಗತೀಕರಣವೆಂಬುದು ಭಾರತ ಮಾತೆಯ ಕೊರಳಿಗೆ ಹಾಕಿದ ಹೂವಿನ ಮಾಲೆ!!" ಆದರೆ, ಅಂದು ಹೂವೆಂದು ಭಾವಿಸಿದುದು ಇಂದು ಮಾತ್ರ "ಹಾವಿನಂತೆ ಪರಿಣಮಿಸುತ್ತಿರುವುದು ಮಾತ್ರ ವಿಪರ್ಯಾಸ!.
ನಿಮಗೆ ಆಶ್ಚರ್ಯವಾಗಬಹುದು.. ಭಾರತ- ಹಳ್ಳಿಗಳ ದೇಶ-ಹಳ್ಳಿಗಳಲ್ಲೇ ನಾಶವಾಗುತ್ತಿದೆ. ಇಂದು ಸಾಮಾಜಿಕವಾಗಿ, ಆರ್ಥಿಕವಾಗಿ, ಸಾಂಸ್ಕೃತಿಕವಾಗಿ ನಾವು ನಮ್ಮ "ಸ್ವಂತಿಕೆಯನ್ನು ಕಳೆದುಕೊಳ್ಳುತಿದ್ದೇವೆ.ಸ್ವಾತಂತ್ರ್ಯವನ್ನು ಕಳೆದುಕೊಳ್ಳುತಿದ್ದೇವೆ.ನಮ್ಮ ಸ್ವಂತ ನಾಗರಿಕತೆಯ ಪರಾಮರ್ಶೆಗೆ,ಇನ್ನೂ ಹೆಚ್ಚಿಗೆ ಹೇಳುವುದಾದರೆ, ನಮ್ಮದೇ ಪೂಜ್ಯ ಗೋಮಾತೆಯೆ 'ಗೋಮೂತ್ರ'ಕ್ಕೂ, ಪಾವನ 'ಪಂಚಗವ್ಯ'ಕ್ಕೂ ಪರಕೀಯರ "ಪೇಟೆಂಟ್" ಕೇಳಬೇಕಾಗಿ ಬಂದಿದೆಯೆಂದರೆ ಜಾಗತೀಕರಣದ ಪ್ರಭಾವವೇನೆಂದು ನೀವೇ ಆಲೋಚಿಸಿ!!
ಒಂದು ಮಾತನ್ನು ಇಲ್ಲಿ ಹೇಳಬೇಕು. ಅದೇ ಡಾರ್ವಿನ್ನನ "ವಿಕಾಸವಾದ"ದ ಸಿದ್ಧಾಂತ.ಆತನ ಪ್ರಕಾರ, ಈ ವಿಶ್ವದಲ್ಲಿ ಬಲಶಾಲಿಗಳಷ್ಟೇ ಉಳಿಯುತ್ತಾರೆ. ಇಂದಿನ ಜಾಗತೀಕರಣಗೊಂಡ ಜಗತ್ತಿಗೆ ಇದು ಹೇಳಿಮಾಡಿಸಿದ ಸಿದ್ಧಾಂತವೇನೋ!!? ಇಂದು ಪ್ರತೀ ಕ್ಷೇತ್ರದಲ್ಲೂ "ಸ್ಪರ್ಧೆ" ವಿಪರೀತವಾಗತ್ತಿದೆ. ಈ ತೀವ್ರತರದ ಸ್ಪರ್ಧೆಯು ಜನರ ಜೀವನದ ವೇಗವನ್ನು ಹೆಚ್ಚಿಸಿದೆ. ಅದೇ-"ಜಿಚಿsಣ ಟiಜಿe" ವೇಗದ ಪರಾಕಾಷ್ಟೆಯೆಂದರೆ ನಾಶ! ಹೌದು; ನಮ್ಮತನವು ನಮ್ಮಲ್ಲೇ ನಾಶವಾಗತ್ತಿದೆ. ಕಾರಣವದೇ- ಜಾಗತೀಕರಣ! ಜುಲೈ 11,2006ರಂದು ಮುಂಬಯಿಯಲ್ಲಿ ಭಯೋತ್ಪಾದಕರಿಂದ ಬಾಂಬ್ ಸ್ಪೋಟಗೊಂಡಿತು. ಮರುದಿನ ಪತ್ರಿಕೆಗಳ ವರದಿ ನೋಡಿ: "ಜನಜೀವನ ಒಂದೇ ದಿನದಲ್ಲಿ ಸಹಜ ಸ್ಥಿತಿಗೆ ಮರಳಿದೆ"!! ಪಾಪ; ವೇಗವಾಗಿ ಬದಲಾಗುತ್ತಿರುವ ವಾಣಿಜ್ಯ ರಾಜಧಾನಿಯಲ್ಲಿ, ಒಂದು ದಿನ ಬಿಡುವು ಮಾಡಿಕೊಂಡರೆ ಆಗವ ದುಪ್ಪಟ್ಟು ನಷ್ಟದ ಅರಿವು ನಮಗೇಕೆ ಆಗುತ್ತಿಲ್ಲ? ನಿಜ; ಜಾಗತೀಕರಣವು ನಮ್ಮ 'ಯೋಚನಾಲಹರಿ'ಯನ್ನೂ ಬದಲಾಯಿಸಿ ಬಿಟ್ಟಿದೆ. ವಾಸ್ತವವಾಗಿ, ನಾವು ಆ ಲಹರಿಗೆ ಒಗ್ಗಿಕೊಳ್ಳದಿದ್ದರೆ ಬಲಹೀನೆರಾಗುತ್ತೇವೆ. ಮತ್ತೆ ಡಾರ್ವಿನ್ನನ ಸಿದ್ಧಾಂತ- "ಬಲಹೀನರ ಅಂತ್ಯ!" ಜಾಗತೀಕರಣ ನಮ್ಮನ್ನು ಆ ಸ್ಥಿತಿಗೆ ತಂದು ನಿಲ್ಲಿಸಿದೆ.
"ಕಾಲ"ವೆಂಬುದು ಯಾವುದೇ ಶಾಸ್ತ್ರವನ್ನು ನಾಶ ಮಾಡಬಲ್ಲುದು. "ಕಾಲಾಯ ತಸ್ಮೈ ನಮಃ" -ಅಲ್ಲವೇ? 'ಆಧುನಿಕ' ಭಾರತೀಯ ಮಹಿಳೆಯನ್ನೊಮ್ಮೆ ನೋಡಿ. ರಾತ್ರಿ ಹತ್ತರ ನಂತರವೇ ಆಕೆಯ ಕೆಲೆಸ "ಛಿಚಿಟಟ ಛಿeಟಿಣಡಿe"ಗಳಲ್ಲಿ ಆರಂಭವಾಗುವುದು. ಅದು ತಪ್ಪಿದರೆ, ವಿವಿಧ 'shiಜಿಣ'ಗಳ ಕೆಲಸ! ಮಗುವನ್ನು ಜೋಗುಳದಲ್ಲಿಟ್ಟುಕೊಂಡು ಮುತ್ತಿಡುವ, ಮುದ್ದಾಡುವ ಮಾತೆಯರಾರೂ ಇನ್ದು ಕಾಣಲಾರರು. ಆ ಮಕ್ಕಳೂ ಅಷ್ಟೇ; ಹುಟ್ಟುವ ಮೊದಲೇ ಹಲವು ಸುತ್ತಿನ ಪರೀಕ್ಷೆ(?)ಗಳನ್ನೆದುರಿಸಿ, ಇನ್ನೇನು ಅಂಬೆಗಾಲಿಡುವ ಹೊತ್ತಿಗೇ "ನರ್ಸರಿ", "ಏ.ಉ"ಛಿಟಚಿssಗಳ "ಇಟಿಣಡಿಚಿಟಿಛಿe ಣesಣ" ಆರಂಭವಾಗಿ ಬಿಡುತ್ತದೆ. ಇಂಥ ಮಕ್ಕಳು ಬೆಳೆಯುವ "ಸಂಸ್ಕಾರ"ವಾದರೂ ಏನು? ಇಂಥ ಮಕ್ಕಳೇ ಮುಂದೆ ಮಾತೆಯರಾದಾಗ, ಯಾವ ನೈತಿಕ ಆಧಾರದಲ್ಲಿ, ಅವರಿಂದ "ಭಾರತೀಯ ಮಾತೃತ್ವ"ವನ್ನು ನಿರೀಕ್ಷಿಸೋಣ? ಮತ್ತೆ ಜಾಗತೀಕರಣವನ್ನು ಹಳಿಯದೆ ಉಪಾಯವಿಲ್ಲ!
"ಪಾಶ್ಚಾತ್ಯಮಿತ್ಯೇವ ನ ಸಾಧು ಸರ್ವಂ" -ಎಂಬ ಉಕ್ತಿಯನ್ನು ನಾವು ಮರೆಯುತ್ತಿದ್ದೇವೆ. ದೂರದ ಅಮೇರಿಕಾದ ಬೆಟ್ಟ ಕಣ್ಣಿಗೆ ನುಣ್ಣನೆ ಕಾಣುತ್ತದೆ. ನಿಜ ಹೇಳಬೇಕಾದರೆ, ಇಂದಿನ ನಾಗರಿಕರಿಗೆ, ಹಣ ಸಂಪಾದಿಸುವ ವಿವಿಧ ದಾರಿಗಳನ್ನು ತೋರಿಸುದುದು, ಇದಕ್ಕಾಗಿ ನೈತಿಕ ಅಥವಾ ಕುಖ್ಯಾತ 'ಆಯಾಮಗಳಲ್ಲಿ' ಅವರು ತೊಡಗುವಂತೆ ಮಾಡಿದ್ದೂ ಜಾಗತೀಕರಣ. "ಅಪ್‍ನಾ ಸಪ್‍ನಾ ಮನಿ-ಮನಿ" -ಎಂದು ಜನತೆ ಕೂಗಿಕೊಳ್ಳಲೂ ಜಾಗತೀಕರಣವೇ ಕಾರಣ.
"ಸಂಸ್ಕೃತ" ನಮ್ಮ ಪೂಜ್ಯ ಭಾಷೆ; ದೇವ ಭಾಷೆ. ಇದೇ ಸಂಸ್ಕೃತವನ್ನು ಇಂದು ಅಭ್ಯಸಿಸುವವರ ಸಂಖ್ಯೆ ಗಣನೀಯವಾಗಿ ಕುಸಿಯುತ್ತಿದೆ. ಜನತೆಯನ್ನು ಕೇವಲ ಲೌಕಿಕ ಸುಖದತ್ತ ಆಕರ್ಷಿಸಿ, ಹಣ ಗಳಿಸುವ ಸುಲಭ ಮಾರ್ಗವನ್ನು ತೋರಿಸಿದ್ದೂ ಜಾಗತೀಕರಣದ ಹೆಗ್ಗಳಿಕೆ! ಎಲ್ಲ ಶಾಲಾ ವಿದ್ಯಾರ್ಥಿಗಳೂ ಇನ್ದು "ವ್ಯಾವಹಾರಿಕ ಶಿಕ್ಷಣ"ದತ್ತಲೇ ತಲೆ ಹಾಕುವಂತೆ ಮಾಡಿ, ಇದಕ್ಕೆ ಗೊಬ್ಬರ ಹಾಕುವಂತೆ ಕಂಡಲ್ಲೆಲ್ಲಾ ಇಂಜಿನಿಯರಿಂಗ್-ಮೆಡಿಕಲ್ ಕಾಲೇಜುಗಳು ಸ್ಥಾಪನೆಯಾದದ್ದೂ ಜಾಗತೀಕರಣದಿಂದಾಗಿಯೇ!!
ಹಾಗೆಂದ ಮಾತ್ರಕ್ಕೆ ಜಾಗತೀಕರಣವು ಸಂಪೂರ್ಣ "ವಜ್ರ್ಯ"ವಲ್ಲ. ಇಂದು ಹಳ್ಳಿಯ ಸಾಮಾನ್ಯ ಕೃಷಿಕನ ಮಗನೂ ಅಮೇರಿಕಾದ ಕನಸು ಕಾಣುವಂತಾದದ್ದು, ನಮ್ಮ 'ವೆಂಕಜ್ಜಿ'ಯೂ, ಮೊಮ್ಮಗಳ ಬಾಣಂತನದ ನೆಪದಲ್ಲಿ ಆಸ್ಟ್ರೇಲಿಯಾಕ್ಕೆ ಹಾರಲು ಸಾಧ್ಯವಾದದ್ದು ಜಾಗತೀಕರಣದಿಂದಾಗಿಯೇ. ನಮ್ಮ ಬೆಂಗಳೂರಿನ ದೇವನಹಳ್ಳಿಯನ್ನೊಮ್ಮೆ ನೋಡಿ: ಯಾವಾಗ ಅಲ್ಲಿ "ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣ" ಸ್ಥಾಪಿಸಲಾಗುವುದೆಂಬ ಸುದ್ದಿ ಹರಡಿತೋ, ಅಂದಿನಿಂದ ಅಲ್ಲಿನ ಭೂಮಿಯ ಕಣ-ಕಣವೂ ಚಿನ್ನವಾಗುತ್ತಿದೆ! ರೈತರು ಟ್ರಾಕ್ಟರ್ ಬಿಟ್ಟು, 'benz" ಕಾರಿನಲ್ಲಿ ಬೆಂಗಳೂರು ಮಾಯಾನಗರಿಯಲ್ಲಿ ಸುತ್ತುತಿದ್ದಾರೆ. ಸಾಂಸ್ಕೃತಿಕ ನಗರಿಗಳು "ಅoಡಿಠಿoಡಿಚಿಣe ಅಚಿಠಿiಣಚಿಟ"ಗಳಾಗಿ ವಿಶ್ವ ನಕಾಶೆಯಲ್ಲಿ ಕಾಣಿಸಿಕೊಳ್ಳಲಾರಂಭಿಸಿವೆ. ಕೂಪ ಮಂಡೂಕಗಳು ಸಾಗರವನ್ನು ಕಾಣುತ್ತಿವೆ!
ಮಹಿಳಾ ನಾಗರಿಕರ ಜೀವನ ಕ್ರಮದಲ್ಲಿ ಆಮೂಲಾಗ್ರ ಬದಲಾವಣೆಗಳಾಗಿವೆ. ಎಲ್ಲಾ ಮಹಿಳೆಯರಿಗೂ "ಗಾರ್ಗಿ-ಮೈತ್ರೇಯಿ"ಯವರಂತಾಗುಗುವ ಅವಕಾಶ ಲಭಿಸಿದೆ. ಪುರುಷರಿಗೆಂದೇ ಮೀಸಲಾಗಿದ್ದ ಹಲವು ಕ್ಷೇತ್ರಗಳಲ್ಲಿ ಮಹಿಳೆಯರೂ ಯಶಸ್ವಿಯಾಗಿ ತಮ್ಮ ಕೈಯ್ಯಾಡಿಸುತ್ತಿದ್ದಾರೆ.
ಹತ್ತೊಂಭತ್ತನೇ ಶತಮಾನದ ಆರಂಭದ ವೇಳೆಗೆ ಜನಸಂಖ್ಯಾ ಸ್ಫೋಟ, ಬಡತನ, ಅನಕ್ಷರತೆಯಿಂದ ಬಳಲುತ್ತಿದ್ದ ಭಾರತ,2020ರ ವೇಳೆಗೆ "ಪ್ರಬಲ ಭಾರತ"ವಾಗುವ ಕನಸು ಕಾಣುತ್ತಿದೆಯೆಂದರೆ ಕಾರಣವೇನು? -ಅದೇ ಜಾಗತೀಕರಣ,ಅದೇ ಗ್ಯಾಟ್ ಒಪ್ಪಂದ, ಅದೇ 'WTO" ಸಹಕಾರ. ಭಾರತಕ್ಕೆ ಇಂದು ವಿದೇಶೀ ನೆರವು ಹಲವು ರೂಪದಲ್ಲಿ ಹರಿದು ಬರುತ್ತಿದೆ. ರಕ್ಷಣಾ ಕ್ಷೇತ್ರದಲ್ಲಿ, ವಿದ್ಯಾ ಕ್ಷೇತ್ರದಲ್ಲಿ, ಆರ್ಥಿಕವಾಗಿ ಭಾರತ ಸಧೃಡವಾಗುತ್ತಿದೆ. ಆಫಿû್ರಕಾದ ಬಡ ರಾಷ್ಟ್ರಗಳಿಗೆ 'ಸಾಲ' ನೀಡುವ ಶಕ್ತಿ ಭಾರತಕ್ಕೆ ಬಂದಿದೆ. ಹಲವು ಬಹು ರಾಷ್ಟ್ರೀಯ ಕಂಪನಿಗಳು(ಒಓಅ's)ಭಾರತದಲ್ಲಿ ಬಂದವಾಳ ಹೂಡಲು ಮುಂದೆ ಬರುತ್ತಿವೆ. ಭಾರತೀಯ ವೈದ್ಯ, ಯಾ ತಾಂತ್ರಿಕರು ಹಲವರು ವಿದೇಶಗಳಲ್ಲಿ ಮಿಂಚುತಿದ್ದಾರೆ. ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಹಲವು ಭಾರತೀಯ ಕುಬೇರರೂ ಪಟ್ಟ ಗಿಟ್ಟಿಸಿದ್ದಾರೆ.
ಇದೇ ಆಗಿದ್ದರೆ, ಯಾವತ್ತೋ ನಾವು ಸಂತಸದಿಂದ, ಹೆಮ್ಮೆಯಿಂದ ಎದೆಯುಬ್ಬಿಸಿ ನಡೆಯಬಹುದಾಗಿತ್ತು, ಆದರೆ, ಪ್ರಸ್ತುತ ನಮ್ಮಲ್ಲಿ ಗಾಬರಿ ಹುಟ್ಟಿಸುವಂತಹ ಅಂಶವಾದರೂ ಏನು?
ಉತ್ತರ ಬಲು ಸರಳ. ಇಂದಿನ ಭಾರತ, ಹಿಂದೆ ಮಾಟ-ಮಂತ್ರ ಮಾಡುತ್ತಿದ್ದರೆನ್ನಲಾದ ಮಾಂತ್ರಿಕರ ಕೈಯಲ್ಲಾಗಲೀ, ಅಥವಾ ಜಗತ್ತೇ ಮೂಗಿಗೆ ಬೆರಳಿಟ್ಟು ನೋಡುತ್ತಿರುವ ನಮ್ಮ ಹೆಮ್ಮೆಯ ವಿಜ್ನಾನಿಗಳ ಕೈಯಲ್ಲಾಗಲೀ ನಿಂತಿಲ್ಲ: ಇದು ಇಂದು ನಿಂತಿರುವುದು ಪುಂಡ ಪುಢಾರಿಗಳಂತಿರುವ, ಸಿಕ್ಕಲ್ಲೆಲ್ಲಾ 'ಪುಂಗುವ' ಸ್ವಾರ್ಥಿ ರಾಜಕಾರಣಿಗಳ ಕೈಯ್ಯಲ್ಲಿ. ಕೇವಲ ಪ್ರತಿಭೆಯೇ ಮಾನದಂಡವಾಗಿರುವ ಜಾಗತೀಕರಣಗೊಂಡ ಜಗತ್ತಿಗೇ ಜಾತ್ಯಾಧಾರಿತ ಮೀಸಲಾತಿಯನ್ನು ಸಾರುವ, ಇವರಿಂದ ನಾವು ಒಳ್ಳೆಯದನ್ನು ಹೇಗೆ ನಿರೀಕ್ಷಿಸಬಹುದು? "ನಮಗೆ ಪ್ರತಿಭೆಯೇ ಮಾನದಂಡ" ಎಂದ "Iಟಿಜಿosಥಿs"ನ ನಾರಾಯಣ ಮೂರ್ತಿಗೇ ಸಡ್ಡು ಹೊಡೆಯುವ, IIಖಿ, ಂIIಒSಗಳಲ್ಲೇ ಔ.ಃ.ಅಯವರಿಗೆ 27% ಮೀಸಲಾತಿಯನ್ನಿಡ್ವ ರಾಜಕಾರಣಿಗಳ ಕೈಯಲ್ಲಿ, ಸತ್ಕಾರ್ಯವನ್ನು ನಿರೀಕ್ಷಿಸುವುದಾದರೂ ಹೇಗೆ? ಇದೇ ಕಾರಣಕ್ಕೆ, ಹೂವಾಗಬೇಕಾದದ್ದು ಹಾವಾಗಿ ಪರಿಣಮಿಸಿದೆ. ಜಾಗತೀಕರಣವು ತನ್ನ ಮನೆಯಲ್ಲೇ ಪರಕೀಯವಾಗಿದೆ. "SEZಗಳ ಹೆಸರಲ್ಲಿ, ರಾಜಕಾರಣಿಗಳು ಸ್ವಾಹಾ ಮಾದುತ್ತಿದ್ದಾರೆ!!
"ವಸುಧೈವ ಕುಟುಂಬಕಂ" ಎಂಬುದು ನಮ್ಮ ಪೂರ್ವಜರ ಕಲ್ಪನೆಯ ಕೂಸು. ಅಂದರೆ, ಈ ಭೂಮಂಡಲವನ್ನೇ ತನ್ನ ಕುಟುಂಬದಂತೆ ಕಾಣಬೇಕೆಂಬುದು ಇದರ ತಾತ್ಪರ್ಯ. ಅದಕ್ಕೆ ಹೊಸ ಆಯಾಮವನ್ನು ನೀಡುತ್ತಿರುವುದು, ಹೊಸ ರೀತಿಯ ಜೀವನ ಕ್ರಮವನ್ನು ಜನರಿಗೆ ಪರಿಚಯಿಸುತ್ತಿರುವುದು ಈ ಜಾಗತೀಕರಣ. ಹೌದು; "ಅhಚಿಟಿge is ಣhe esseಟಿಛಿe oಜಿ ಟiಜಿe!!" ಆದರೆ, ಆ 'ಛಿhಚಿಟಿge' ಒಳ್ಳೆಯದಕ್ಕಾದರೆ ಮಾತ್ರ!. ಜಾಗತೀಕರಣದಿಂದಾಗುತ್ತಿರುವ ಬದಲಾವಣೆಯೂ ಒಳ್ಳೆಯದಕ್ಕೇ ಆಗಬೇಕು. ಆ "esseಟಿಛಿe" ಅನ್ನು ನಾವು ಸವಿಯಬೇಕು. ಅದಕ್ಕಾಗಿ, ಇಂದು ಬೇಕಾಗಿರುವುದು ಸಮರ್ಥವಾದ ನಾಯಕತ್ವ, ಸ್ಪಟಿಕ ಶುದ್ಧ ಮನಸ್ಸಿನ ದೂರದೃಷ್ಟಿ. ಅಂತಹ ಪ್ರಭಾವೀ ನಾಯಕ, ನಮ್ಮೊಳಗಿನ ನಾಗರಿಕರಲ್ಲೇ ಇರುವವನು. ಇನ್ನೂ ಹೇಳಬೇಕೆಂದರೆ, ಜಾಗತೀಕರಣವು ಗುಣಪಡಿಸಲಾಗದ "ಏಡ್ಸ್" ರೊಗದ ಹಂತಕ್ಕೇನೂ ಬಂದಿಲ್ಲ!. ಅರೋಗ್ಯಕರವಾಗಿಲ್ಲ ಅಷ್ಟೇ. ಅದರಿಂದಾಗಿಯೇ, ಸಮಸ್ತ ನಾಗರಿಕರ ಜೀವನವೂ ಅನಾರೊಗ್ಯಕರವಾಗಿರುವುದು.
ಜಾಗತೀಕರಣಕ್ಕೆ ಹಿಡಿದಿರುವ ಈ ರೊಗದ ಬೇರು ಸಹಿತ ನಾಶದ ದಿನವು ಶೀಘ್ರವಾಗಿ ಬರಲಿ -ಎಂದು ಹಾರೈಸೊಣ
-ಅಲ್ಲವೆ?!

1 comment:

ಬಿಲ್ಡ್ ಫೇಲ್ಯೂರ್ -(Build Failure): ಒಂದು ಜೆಂಕಿನ್ಸ್ ಕವಿತೆ

[Inspired by a poem of my hostel senior, Vinayak K] Shatpadi: Bhaminee - see the rules here     ಒಂದು ಬೋರಿಂಗ್ ಶುಕ್ರವಾರದಿ  ಮುಂದೆ ಬರಲಿಹ ಸಾಲು ರಜ...