ನಾನೇನೂ ಬಿಜೆಪಿ ಬೆಂಬಲಿಗನಲ್ಲ ; ಪ್ರಜಾಪ್ರಭುತ್ವ ಹೊಂದಿರುವ ಭವ್ಯ ಭಾರತದ ಸಾಮಾನ್ಯ ಪ್ರಜೆಯಷ್ಟೇ .
ಗುಜರಾತ್ ಬಗ್ಗೆ ಕೇಳಿದ್ದೇನೆ, ನರೇಂದ್ರ ಮೋದಿ (ನಮೋ) ಬಗ್ಗೆ ಕೇಳಿದ್ದೇನೆ. ಹತ್ತು ವರುಷಗಳಲ್ಲಿ ಗುಜರಾತ್ ಕಂಡ ಅಭೂತಪೂರ್ವ ಯಶಸ್ಸನ್ನು ನೋಡುತ್ತಿದ್ದೇನೆ.
ಭಾರತವನ್ನೂ ನೋಡುತ್ತಿದ್ದೇನೆ.
2G, ಕಾಮನ್ ವೆಲ್ತ್ ಗೇಮ್ಸ್ ಹಗರಣಗಳು, ಪೆಟ್ರೋಲ್ ರೇಟು ಏರಿಕೆ, ಯುರೇನಿಯಂ ಹಗರಣವನ್ನೇ ಮುಚ್ಚಿ ಹಾಕಿದ್ದು ನಮ್ಮೆದುರೇ ನಡೆದೇ ಇದೆ.
ಭಾರತದಲ್ಲಿ ಕೃಷಿ ಕ್ಷೇತ್ರದ ಅಭಿವೃದ್ಧಿ ಕೇವಲ ಒಂದು ಶೇಕಡಾ ಎಂದು ಪ್ರಧಾನಿ ಬೇಜಾರು ಮಾಡಿಕೊಂಡಿದ್ದಾರೆ. ಅದು ಸತ್ಯವೂ ಕೂಡ.
ಅಲ್ಲ! ಗುಜರಾತ್ ನಲ್ಲಿ ಮಾತ್ರ ಅದೇಗೆ ಹದಿನಾರು ಶೇಕಡಾ ಪ್ರಗತಿ ಕೃಷಿ ಕ್ಷೇತ್ರದಲ್ಲಿ?
http://pmindia.gov.in/index.php, http://www.narendramodi.in ವೆಬ್ ಸೈಟ್ ಗಳನ್ನು ನೋಡುತ್ತಾ ಇದ್ದೇನೆ.
ಮನಮೋಹನ ಸಿಂಗರ ವೆಬ್ ಪೇಜ್ ನಲ್ಲಿ ಆಕರ್ಷಣೀಯವಾದ ಒಂದೇ ಒಂದು ಪುಟ ಇಲ್ಲ. ಅದೇ ನರೇಂದ್ರ ಮೋದಿಯ ಒಂದೊಂದು ಭಾಷಣದ ವೀಡಿಯೊ ಕೂಡ ಗುಜರಾತ್ ಬೆಳೆದು ಬಂದ ದಾರಿಯನ್ನು ಸಾರಿ ಹೇಳುತ್ತಿವೆ.
ಬಂಡವಾಳಶಾಹಿಗಳು ಗುಜರಾತ್ ಎಂದರೆ ಮುಗಿ ಬೀಳುತ್ತಿದ್ದಾರೆ. ಆದರೂ ನಮೋ ಸ್ವಾರ್ಥಿಯಲ್ಲ. ದೇಶದ ಒಳಿತಿಗಾಗಿ ಅದೆಷ್ಟೋ ಬಹು ದೊಡ್ಡ ಕೈಗಾರಿಕೆಗಳನ್ನು ಬೇರೆ ರಾಜ್ಯಗಳಿಗೂ ಕಳುಹಿಸಿ ಕೊಟ್ಟಿದ್ದಾರೆ.
ಇಂಥವರು ನಮಗೆ ಬೇಕು.ಭಾರತಕ್ಕೆ ಬೇಕು.
ಮೌನ ಯುಗ ಮುಗಿಯಬೇಕು. ಅದು ಸಾಕಾಗಿದೆ.
ಕಾಡು ನೋಡೋಣ!
No comments:
Post a Comment