'ಬಂಧುಗಳೇ ! ಭಗಿನಿಯರೇ ' ಎಂದನಾ ಸಿದ್ಧ
ಸಂತೆಯಲೂ ಸಾಸಿವೆ ಶಬ್ದ! ಕೇಳಲೋಸುಗ ಶಬ್ದ-ಶುದ್ಧ
ಆರ್ಡರು ಮಾಡಿದಾತ ಬಸವಳಿದು ತಾ ಬಿದ್ದ
ಗೆದ್ದವನಲ್ಲ ಸಿದ್ಧ! ಗೆದ್ದದ್ದು ಶಬ್ದ!
*****
ಶಬ್ದ ಗುಚ್ಛಗಳಲ್ಲಿ ಯಾವುದದು ಪ್ರಥಮ?
ಜಿಜ್ಞಾಸೆ ಮೂಡೆ, ಉತ್ತರಿಸಿದನು ಮಹಿಮ-
ದೇಶ ಕಾಲವ ನೋಡಿ ಆಡುವವ ಗರಿಮ
ಬಲ್ಲವನೇ ಬಲ್ಲ ಶಬ್ದಗಳ ಮರ್ಮ!
*****
ಬೆಳೆದು ಮಾತಿಗೆ ಮಾತು ಸಮರಕೂ ಸಿದ್ಧ!
'ಪೆದ್ದ! ಯೋಚಿಸು ಮುನ್ನ!' ಸಂಧಾನದಲಿ ಬುದ್ಧ
'ಮಾತಿನಿಂ ಕಲ್ಯಾಣ; ಪ್ರಳಯ ಬೇಕಿಲ್ಲ'
ಶಾಂತವಾಯಿತು ಜನತೆ. ಮತ್ತೆ-ಗೆದ್ದದ್ದು ಶಬ್ದ!
*****
[ಎಸ್ -ಜೆ-ಸಿ-ಇ ಕಾಲೇಜಿನ ವಾರ್ಷಿಕ ಸಾಹಿತ್ಯಕ ಹಬ್ಬ ।।ಶಬ್ದ್।। ಸಂದರ್ಭ ಬರೆದ 'instant' ಕವಿತೆ ]
No comments:
Post a Comment